Responsive Image

ಲೆಕ್ಕ ಪತ್ರಗಳ ವಿವರಗಳು

1. ವಂಶಾವಳಿ ವಿವರ

ಆಡುಗಳ ಸಂಖ್ಯೆ ಅಥವಾ ಹೆಸರು ಅಥವಾ ಗುರುತಿನ ಚಿನ್ಹೆ ಹುಟ್ಟಿದ ದಿನಾಂಕ ಅಥವಾ ಖರೀದಿಸಿದ ದಿನಾಂಕ ತಂದೆಯ ಸಂಖ್ಯೆ ಅಥವಾ ಹೆಸರು ಮತ್ತು ಗುರುತಿನ ಚಿನ್ಹೆ ತಾಯಿಯ ಸಂಖ್ಯೆ ಅಥವಾ ಹೆಸರು ಮತ್ತು ಗುರುತಿನ ಚಿನ್ಹೆ ತಾಯಿಯ ಸೂಲಿನ ಸಂಖ್ಯೆ ತಾಯಿಯ ಸೂಲಿನ ಗರಿಷ್ಟ ಹಾಲಿನ ಉತ್ಪಾದನೆ ಇತರೆ

2. ಗರ್ಭಧಾರಣೆ ವಿವರ

ಆಡುಗಳ ಸಂಖ್ಯೆ ಅಥವಾ ಹೆಸರು ಅಥವಾ ಗುರುತಿನ ಚಿನ್ಹೆ ಕಟ್ಟಿಸಿದ ಅಥವಾ ಹೋತದೊಂದಿಗೆ ಮಿಲನವಾದ ದಿನಾಂಕ ಹೋತದ ಸಂಖ್ಯೆ ಅಥವಾ ಹೆಸರು ಅಥವಾ ಗುರುತಿನ ಚಿನ್ಹೆ ಗರ್ಭ ಪರೀಕ್ಷೆ ಮಾಡಿಸಿದ ದಿನಾಂಕ ಮರಿ ಹಾಕಿದ ದಿನಾಂಕ ಒಟ್ಟ ಮರಿಗಳು (೧/೨/೩) ಮರಿಯ ಲಿಂಗ ಮರಿಯ ತೂಕ ಇತರೆ

3. ಹಾಲು ಉತ್ಪಾದನೆ ವಿವರ (ಅವಶ್ಯಕತೆಯಿದ್ದರೆ ಮಾತ್ರ)

ಆಡುಗಳ ಸಂಖ್ಯೆ ಅಥವಾ ಹೆಸರು ಅಥವಾ ಗುರುತಿನ ಚಿನ್ಹೆ ಮರಿ ಹಾಕಿದ ದಿನಾಂಕ ತಾಯಿಯ ಸೂಲಿನ ಸಂಖ್ಯೆ ದಿನದ ಹಾಲು ಉತ್ಪಾದನೆ ಸೂಲಿನ ಒಟ್ಟು ಹಾಲು ಉತ್ಪಾದನೆ ಹಾಲು ನಿಲ್ಲಿಸಿದ ದಿನಾಂಕ ಒಟ್ಟು ಹಾಲು ಕೊಡುವ ಆಡುಗಳ ಸಂಖ್ಯೆ

4. ಆಡುಗಳ ಆರೋಗ್ಯ ವಿವರಗಳು

ಆಡುಗಳ ಸಂಖ್ಯೆ ಅಥವಾ ಹೆಸರು ಸಾಂಕ್ರಾಮಿಕ ರೋಗಗಳ ಮುಂಜಾಗ್ರತೆ ಚುಚ್ಚುಮದ್ದು ಅ.ನಂ. ತಾ. ರೋಗಗಳಿಗೆ ಜಂತುನಿವಾರಕ ಔಷಧ ಹಾಕಿದ ದಿನಾಂಕ ಉಣ್ಣೆ / ಚಿಕ್ಕಾಡುಗಳ ನಿವಾರಣೆಗೆ ಔಷಧ ಸಿಂಪಡಿಸಿದ ದಿನಾಂಕ ಜೋನ್ಷ, ಕ್ಷಯ, ಬ್ರುಸೆಲ್ಲಾಗೆ ತಪಾಸಣೆ ಇತರೆ

5. ಮೇವು ಮತ್ತು ದಾಣಿ ಮಿಶ್ರಣದ ವಿವರ

ದಿನಾಂಕ ಒಟ್ಟು ಆಡುಗಳ ಸಂಖ್ಯೆ ಹಸಿರು ಮೇವು (ಕಿ.ಗ್ರಾಂಗಳಲ್ಲಿ) ಒಣ ಮೇವು (ಕಿ.ಗ್ರಾಂಗಳಲ್ಲಿ) ದಾಣಿ ಮಿಶ್ರಣ (ಕಿ.ಗ್ರಾಂಗಳಲ್ಲಿ) ಇತರೆ (ಕಿ.ಗ್ರಾಂಗಳಲ್ಲಿ)

6. ಆಡುಗಳ ಮಾರಾಟದ ವಿವರಗಳು

ಆಡುಗಳ ಸಂಖ್ಯೆ ಅಥವಾ ಹೆಸರು ಆಡುಗಳ ಮಾರಾಟದ ದಿನಾಂಕ ಆಡುಗಳ ಮಾರಾಟದ ತೂಕ ಆಡುಗಳ ಮಾರಾಟದ ವಯಸ್ಸು ಮಾರಾಟದ ಬೆಲೆ ರೂ. ಮಾರುಕಟ್ಟೆ ಕಾರಣ ಯಾರಿಗೆ ಮಾರಿದ್ದು

ಆಡು/ ಮೇಕೆ ಸಾಕಾಣಿಕೆಯಲ್ಲಿ ಬಂಡವಾಳದ ಲಭ್ಯತೆ ಮತ್ತು ಯೋಜನೆಗಳು

ರಾಷ್ಟ್ರೀಕೃತ, ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳು ಆಡು/ ಮೇಕೆ ಉದ್ಯಮವನ್ನು ಪ್ರಾರಂಭಿಸುವುದಕ್ಕೆ ಹಣ ಸಾಲ ನೀಡುತ್ತವೆ. ಸಣ್ಣ ಪ್ರಮಾಣದ ಆಡು/ ಮೇಕೆ ಘಟಕಗಳನ್ನು ಪ್ರಾರಂಭಿಸುವದಕ್ಕೆ ಸಣ್ಣ ರೈತರಿಗೆ ಸರ್ಕಾರಿ ಪುರಸ್ಕೃತ ಯೋಜನೆಗಳು ಕೂಡ ಇವೆ. ಮುಂಜಾಗರೂಕತೆ ಕ್ರಮವಾಗಿ ಆಡು/ ಮೇಕೆಗಳಿಗೆ ವಿಮೆ ಮಾಡಿಸಬೇಕು.

ಸರಕಾರದ ಯೋಜನೆಗಳ ಕುರಿತು ವಿಡಿಯೊ : Schemes in Govt for livestock and livestock farmer development

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವತಿಯಿಂದ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ, ಪಶು ಭಾಗ್ಯ ಯೋಜನೆ, ವಿಶೇಷ ಅಭಿವೃದ್ದಿ ಯೋಜನೆ, ಮೇವು ಕಟಾವು ಯಂತ್ರಗಳ ಸರಬರಾಜು, ಮೇವಿನ ಮಿನಿಕಿಟ್‌ಗಳ ಸರಬರಾಜು ಯೋಜನೆ, ಸಾಮೂಹಿಕ ಲಸಿಕಾ ಕಾರ್ಯಕ್ರಮ ಗಳಂತಹ ವಿವಿಧ ಯೋಜನೆ ಮತ್ತು ಸೌಲಭ್ಯಗಳಿವೆ.